AVG English Medium School

ಬನ್ನೂರಿನ ಕೃಷ್ಣನಗರದ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ದಿನಾಂಕ 19 ಆಗಸ್ಟ್ ಸೋಮವಾರದಂದು ರಕ್ಷಾ ಬಂಧನ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ಪಿ ರವರು ದೀಪ ಬೆಳಗಿಸಿ ರಕ್ಷಾಬಂಧನದ ಉದ್ಘಾಟನೆಯನ್ನು ಮಾಡಿ ಸಹೋದರತ್ವದ ಸಂಬಂಧದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಶಾಲಾ ಉಪಾಧ್ಯಕ್ಷರಾದ ಶ್ರೀ ಉಮೇಶ್ ಗೌಡ ಮಳುವೇಲು ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ಎ.ವಿ. ನಾರಾಯಣ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಶ್ರೀ ಹೆಗಡೆ ಸಂದರ್ಭೋಚಿತವಾಗಿ ರಕ್ಷಾಬಂಧನದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಯುತ ವೆಂಕಟರಮಣ ಗೌಡ ವಹಿಸಿದ್ದು ರಕ್ಷಾಬಂಧನದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ವೃಂದ, ಪೋಷಕವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕೆ ಯವರು ಸ್ವಾಗತಿಸಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶ್ರೀಮತಿ ಚಂದ್ರಿಕಾ ರವರು ವಂದನಾರ್ಪಣೆ ಮಾಡಿದರು.

ಶ್ರೀಮತಿ ರಂಜಿತಾ ರೈ ಮತ್ತು ರೀಮಾ ಲೋಬೋ ರವರು ಕಾರ್ಯಕ್ರಮ ನಿರೂಪಿಸಿದರು.

 

Source link: Akkare News

Social media & sharing icons powered by UltimatelySocial