AVG English Medium School

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾಕ್ರಿ ಕುಟುಂಬದ ಸದಸ್ಯರಾಗಿರುವ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್ ಗೌಡ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಇಂಟರ್ ಕ್ಲಬ್ ಓಪನ್ ಮೆನ್ ಅಥ್ಲೆಟಿಕ್ ವಿಭಾಗದ ಜೀವರಕ್ಷಕ ವಿಶ್ವ ಚಾಂಪಿಯನ್ ಗೆ ಭಾರತದ ಈಜು ತಂಡದ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಇವರನ್ನು ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬನ್ನೂರು ಪುತ್ತೂರು, ಎವಿಜಿ ಟ್ರಸ್ಟ್ ನ ಪದಾಧಿಕಾರಿಗಳು ಜಂಟಿಯಾಗಿ ಸನ್ಮಾನಿಸಿ ಹಾರ್ಥಿಕ ಧನ ಸಹಾಯವನ್ನಿತ್ತು ಶುಭ ಹಾರೈಕೆಗಳೊಂದಿಗೆ ನಮ್ಮ ದೇಶದ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿ ಎಂದು ಹಾರೈಸಿ ಶುಭನುಡಿಗಳೊಂದಿಗೆ ಆಶೀರ್ವಾದವನ್ನಿತ್ತು ಬೀಳ್ಕೊಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಗೌಡ ಕಳುವಾಜೆ ,ಸಂಚಾಲಕರಾದ ಶ್ರೀಯುತ ಎ.ವಿ. ನಾರಾಯಣ ರವರು, ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಗುಡ್ಡಪ್ಪ ಗೌಡ ಬಲ್ಯ ರವರು, ಉಪಾಧ್ಯಕ್ಷರಾದ ಶ್ರೀಯುತ ಉಮೇಶ್ ಗೌಡ ಮಲುವೇಳುರವರು ಹಾಗೂ ವಿಷ್ಣು ಮೂರ್ತಿ ದೇವಸ್ಥಾನ ಕುರಿಯ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮಧುನರಿಯೂರು, ಸಂಸ್ಥೆಯ ಶಿಕ್ಷಕವೃಂದ, ಬೋಧಕೇತವೃಂದ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Social media & sharing icons powered by UltimatelySocial